payaniaga naanamma

Posted January 15, 2011 by anaamikamathu
Categories: Uncategorized

ನನಗೆ ಕೊಲಾಜ್ ದಿನಗಳಲ್ಲಿ ಆಗುಂಬೆ ಘಾಟಿ ಹತ್ತಬೇಕೆಂಬ ಅಸೆ ಅದಕ್ಕಾಗಿ ನನ್ನ ಗೆಳೆಯರಿಗೆ ತುಂಬಾ ಸಾರಿ ಬೈಕ್ ಸಾಲವಾಗಿ ಕೇಳಿದ್ದೆ ಆದರೆ ನನ್ನ ಅಸೆ ನೆರವೇರಿದ್ದು ವರ್ಷ ೧೯೯೪.ನಾನು ಆಯ್ದುಕೊಂಡ ದಾರಿ ಉಡುಪಿ- ಮಣಿಪಾಲ – ಹಿರಯಾದ್ಕ – ಹೆಬ್ರಿ – ಆಗುಂಬೆ. ವರ್ಷ ೧೯೯೪ ನನ್ನ ಬಳಿ M – 80 ಬಜಾಜ್ ಮೋಟೊರ್ ಬೈಕ್ ಇತ್ತು ಉಡುಪಿಯಲ್ಲಿ ಪೆಟ್ರೋಲ್ ತುಂಬಿಸಿ ಒಬ್ಬಂಟಿಯಾಗಿ ಬೈಕ್ ಹತ್ತಿದೆ. ಬೈಕ್ ತನ್ನ ವೇಗದಲ್ಲಿ ನನ್ನ ಆಸೆಯನ್ನು ನೆರವೇರಿಸಲು ಮುಂದುವರೆಯುತ್ತಿತ್ತು 

ವರಂಗ ವರಂಗ ಜೈನರ ಪವಿತ್ರ ಯಾತ್ರಾ ಸ್ತಳ ಇದು ಮೂರು ಹಳೆ ಜೈನ ಬಸದಿ ಇರುವ ಸ್ತಳ .ಚಂದ್ರನಾಥ್ ಬಸದಿ , ನೆಮಿನಾಥ್ ಬಸದಿ ಇವೆರಡು ಕೆರೆಯ ದಡದಲ್ಲಿ ಇದೆ ಹಾಗು ಕೆರೆ ಬಸದಿ ‘ಚತುರ್ಮುಖ ಬಸದಿ ಕೆರೆಯ ಮದ್ಯ ಭಾಗದಲ್ಲಿ ಇದೆ ಈ ಬಸದಿಗಳು ನಾಲ್ಕು ಜೈನ ತಿರ್ಥನ್ಕರರಿಗೆ ಕಟ್ಟಲಾಗಿದೆ ಪಾರ್ಶ್ವನಾಥ್ , ನೆಮಿನಾಥ್ , ಅನಂಥ್ನಾಥ್ ಮತ್ತು ಶಾಂತಿನಾಥ್ . ಕೆರೆ ಬಸದಿ ಹದಿನೆಂಟನೆ ಶತಮಾನದಲ್ಲಿ ಕಟ್ಟಲಾಗಿದೆ ವರಂಗ ಕಾರ್ಕಳದಿಂದ 25 KMs ದೂರದಲ್ಲಿದ್ದು ಕಾರ್ಕಳ – ಹೆಬ್ರಿ ರೋಡ್ ನಲ್ಲಿದೆ (ಹೆಬ್ರಿಯಿಂದ 9KMs ).ಬೆಂಗಳುರಿನಿಂದ ಸುಮಾರು 385KMs ಹಾಗು ಮಂಗಳೂರಿನಿಂದ 90 KMs ದೂರದಲ್ಲಿದೆ

ಸಂಸೆಟ್ಟ ಪಾಯಿಂಟ್ ಆಗುಂಬೆಯ ಅತ್ಯಂತ ಜನಪ್ರಿಯ ತಾಣ ಕನ್ನ್ನಡದ ವರ ನಟ Dr ರಾಜಕುಮಾರ್ ತನ್ನ ಆಕಸ್ಮಿಕ ಸಿನಿಮಾದಲ್ಲಿ ಆಗುಂಬೆಯ ಸುಂದರವಾದ ಸೂರ್ಯಾಸ್ತಮಾನದ ದ್ರಶ್ಯ ತುಂಬಾ ಸುಂದರವಾಗಿ “ಆಗುಂಬೆಯ ಪ್ರೀಮ ಸಂಜೆಯ ” ಹಾಡಿನಮೂಲಕ ತೋರಿಸಿದ್ದಾರೆ ಈ ಸಂಸೆಟ್ಟ ಪಾಯಿಂಟ್ ಘಾಟಿಯ ಹದಿನಾಲ್ಕನೇ ತಿರುವಿನಲ್ಲಿ ಇದೆ.

ಆಗುಂಬೆ ಎಂದರೆ ನಮಗೆಲ್ಲ ನೆನಪಿಗೆ ಬರುವುದು ಮಾಲ್ಗುಡಿ ಡೇಸ್ ಜನಪ್ರಿಯ ಟಿವಿ ಧಾರಾವಾಹಿ ಮಾಲ್ಗುಡಿ ಡೇಸ್ ಪೂರ್ತಿಯಾಗಿ ಆಗುಂಬೆಯ ಪರಿಸರಸಲಿ ಶಂಕರ ನಾಗ್ ತೆಗೆದಿರುತ್ತಾರೆ ಇವತ್ತಿಗೂ ಮಾಲ್ಗುಡಿ ಡೇಸ್ ನಮ್ಮ ಮನಸಿನ್ನಲ್ಲಿ ನಿಲ್ಲಲು ಒಂದು ಕಾರಣ ಆಗುಂಬೆ ಎಂದಲ್ಲಿ ತಪ್ಪಲ್ಲ..

ದ್ಯಾನ ಕಾಲ

Posted December 28, 2010 by anaamikamathu
Categories: Uncategorized

ದ್ಯಾನ ಕಾಲ
ನನಗನ್ನಿಸುತ್ತದೆ ನಮ್ಮ ಮನಸಿನಲ್ಲಿ ಏನಿರುತ್ತದೆ ಎಂದು ಯಾವ ಕಾಲಕ್ಕೇ ಆಗಲಿ ತಿಳಿಯಲು ಆಗುವುದಿಲ್ಲ,ಅದಕ್ಕೆ ನಾವೇ ಕಾರಣವಗಿರುತ್ತೇವೆ ಎಂದು ನನ್ನ ಮನಸಿನ ಭಾವನೆ.
ನಮ್ಮಮೇಲೆ ನಮಗೆ ನಂಬಿಕೆ ಇರುವುದಿಲ್ಲ,ನಮ್ಮ ಕೆಲಸದ ಮೇಲೆ ನಮಗೆ ಗಮನ ಇರುವುದಿಲ್ಲ. ನಮ್ಮ ಜೀವನ ಗೊತ್ತು ಗುರಿ ಇಲ್ಲದೆ ತನ್ನ ಪಾಡಿಗೆ ಹಗಲು ರಾತ್ರಿ ಹೇಗೆ
ಆಗುತ್ತದೆಯೋ ಹಾಗೆ ಒಂದೇ ವೇಗದಲ್ಲಿ ಚಲಿಸುತ್ತಿದೆ ಆದರು ನಾವು ಜೀವನವನ್ನು ಗಂಭಿರವಾಗಿ ತೆಗೆದುಕೊಳ್ಳುವುದಿಲ್ಲ.
ಈ ಕೆಳಗೆ ನಮ್ಮ ಸನಾತನ ಹಿಂದೂ ಧರ್ಮದ ಜೀವವಾಹಿನಿಯಾಗಿರುವ ಶ್ಲೋಕಗಳನ್ನು ಕನ್ನಡ ಸಾರಾಂಶ ಸಹಿತ ಪ್ರಸ್ತುತ ಪಡಿಸುತಿದ್ದೇನೆ
ಸಮಯ ಸಿಕ್ಕಿದಾಗೆಲ್ಲ ಇದನ್ನು ಧ್ಯಾನಿಸಿದರೆ ನಮ್ಮ ಮನಸ್ಸು ಪ್ರಶಾಂತವಾಗಿರುತ್ತದೆ

ಓಂ ಅಸತೋ ಮಾ ಸದ್ಗಮಯ
ತಮಸೋಮ ಜೋತಿರ್ಗಮಯ
ಮೃತ್ಯೋರ್ಮಾ ಅಮೃತಂ ಗಮಯ
ಓಂ ಶಾಂತಿ ಶಾಂತಿ ಶಾಂತಿ
ಅಸತ್ಯದಿಂದ ಸತ್ಯದ ಕಡೆಗೆ ನನ್ನನ್ನು ನಡೆಸು ಅಂಧಕಾರದಿಂದ ಜ್ಯೋಥಿಯತಾ ನನ್ನನು ನಡೆಸು ಮೃತ್ಯುವಿನಿಂದ ನನ್ನನ್ನು ಅಮ್ರುಥತ್ವಕ್ಕೆ ನನ್ನನ್ನು ನಡೆಸು ಓಂ ಶಾಂತಿ ಶಾಂತಿ ಶಾಂತಿ
ಗುರು
ಗುರು ಭ್ರಹ್ಮಾ ಗುರು ವಿಷ್ಣು ಗುರುರ್ದೇವೋ ಮಹೇಶ್ವರಃ
ಗುರು ಸಕ್ಷ್ಟಥ್ ಪರಬ್ರಹ್ಮ ತಸ್ಮಸೈ ಗುರವೇ ನಮಃ
ಗುರೂ ಭ್ರಹ್ಮಾ ವಿಷ್ಣು ಮತ್ತು ಮಹೇಶ್ವರ ಸ್ವರುಪನಗಿದ್ದಾನೆ . ಸಾಕ್ಷಾತ್ ಪರಬ್ರಹ್ಮ ವಸ್ತು ಗುರುವೇ ಆಗಿದ್ದಾನೆ
ಹಾಗಾಗಿ ಗುರುವಿಗೆ ನಮ್ಮ ವಂದನೆ
ಸರಸ್ವತಿ
ಸರಸ್ವತಿ ನಮಸ್ತುಭ್ಯಂ ವರದೇ ಕಮರುಪಿನೆ
ವಿದ್ಯಾರಮ್ಬಂ ಕರಿಶ್ಯಮಿ ಸಿದ್ದಿರ್ಭವತು ಮೇ ಸದಾ
ದೇವಿ ಸರಸ್ವತಿ ವರವನ್ನು ನೀಡುವ ನೀನು ಇಚ್ಹೆಗನುಗುಣವಾಗಿ ರೂಪಧರಿಸಬಲ್ಲೆ, ನಿನಗೆ ನಮಸ್ಕಾರ
ವಿದ್ಯಾರಂಭ ಮಾಡುವೆನು ನನಗೆ ಸಿದ್ದಿಯನ್ನು ನೀಡು
ಗಜನಾನ
ವಕ್ರತುಂಡ ಮಹಾಕಾಯ ಕೋಟಿ ಸೂರ್ಯ ಸಮಪ್ರಭ
ನಿರ್ವಿಘ್ನಂ ಕುರುಮೆ ದೇವ ಸರ್ವಕಲೆಶು ಸರ್ವಧಾ
ದೇವ ಗಜಾನನ ಲಮ್ಬೋಧರಣದ ನೀನು ಕೋಟಿ ಸೂರ್ಯರ ಪ್ರಭೆ ಉಲ್ಲವನಗಿರುವೆ ಎಲ್ಲ ಕಾರ್ಯದಲ್ಲಿ ನನಗೆ ಯಾವಾಗಲು ನಿರ್ವಿಘ್ನವಾಗಿ ಮಾಡು
ರಾಮ
ರಾಮಾಯ ರಾಮ ಭದ್ರಾಯ ರಾಮಚಂದ್ರಾಯ ವೇಧಸೇ
ರಘುನಥಯ ನಥಯ ಸೀತಾಯಃ ಪತಯೇ ನಮಹಃ
ಸೀತಾ ಪತಿ ಶ್ರೀ ರಾಮನಿಗೆ ನಮಸ್ಕಾರ ಅವನು ಮಂಗಳ ಸ್ವರೂಪಿ ಚಂದ್ರನಂತೆ ಮುದನೀದಬಲ್ಲವ ಮತ್ತು ಸಾಕ್ಷಾತ್ ಪ್ರಭ್ರಮಹಃ ಆದ್ದರಿಂದ ರಘುಕುಲ ಒಡೆಯನಾದರೂ
ಲೋಕಕ್ಕೆಲ್ಲ ಸ್ವಾಮಿಯಾಗಿದ್ದಾನೆ
ಕೃಷ್ಣ
ವಾಸುದೇವ ಸುತಂ ದೇವಂ ಕಂಸ ಚಾನುರ ಮರ್ಧನ
ದೇವಕಿ ಪರಮನದಂ ಕೃಷ್ಣಂ ವಂದೇ ಜಗದ್ಗುರುಂ
ಸಮಸ್ತ ಪ್ರಪಂಚಕ್ಕೆ ಗುರುವಾದ ಕೃಷ್ಣನು ನಮಸ್ಕರಿಸುತ್ತೇನೆ ಅವನು ವಾಸುದೇವನ ಪುತ್ರ ದೇವನದ ಇತಹನು ಕಂಸ ಮತ್ತು ಚಾನುರಾ
ಎಂಬ ಭಯಂಕರ ರಾಕ್ಷಸನನ್ನು ನಶಮಡಿದ್ದಾನೆ ತಾಯಿ ದೇವಕಿಗೆ ಯಾವಾಗಲು ಸಂತೋಷ ನೀಡಿದ್ದಾನೆ

Posted December 16, 2010 by anaamikamathu
Categories: Uncategorized

ಕನ್ನಡ ಬಾಷೆಗೆ ತನ್ನದೇ ಆದ ಸ್ವಂತವಾದ ನಾಗರಿಕತೆ ಇದೆ ಹಾಗು ಇಂದಿನ ಅಧುನಿಕ ಯುಗದಲ್ಲಿ ಕನ್ನಡಭಾಷೆಯು ಪ್ರಪಂಚದ ಮೂವತ್ತೆರಡನೇ ಜನಪ್ರಿಯ ಭಾಷಾ ಸ್ಥಾನ ಮಾನ ಗಳಿಸಿದೆ ಕನ್ನಡ ಸಾಹಿತ್ಯ ಕಥೆ ಕವನ ಕಾದಂಬರಿ ಗಳಿಂದ ಶ್ರೀಮಂತವಾಗಿದೆ.ಈವರೆಗೆ ಎಳು ಕನ್ನಡ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಯಿ೦ದ ಪುರಸ್ಕೃತಗೊ೦ಡು, ಕನ್ನಡವನ್ನು ಅತೀ ಹೆಚ್ಚು ಜ್ಞಾನಪೀಠ ಪ್ರಶಸ್ತಿ ಪಡೆದ ಭಾಷೆಗಳಲ್ಲೊಂದಾಗಿ ಮಾಡಿದ್ದಾರೆ. ಜ್ಞಾನಪೀಠ ಪ್ರಶಸ್ತಿ ಪಡೆದ ಕನ್ನಡ ಸಾಹಿತಿಗಳ ಪಟ್ಟಿ ಹೀಗಿದೆ.
೧. ಡಾ|| ಕು. ವೆ೦ ಪುಟ್ಟಪ್ಪ(ಕುವೆಂಪು)
ವರ್ಷ: ೧೯೬೭
ಕೃತಿ: ಶ್ರೀ ರಾಮಾಯಣ ದರ್ಶನ೦

೨. ದ ರಾ ಬೇಂದ್ರೆ
ವರ್ಷ: ೧೯೭೩
ಕೃತಿ: ನಾಕು ತಂತಿ

೩. ಕೋಟ ಶಿವರಾಮ ಕಾರ೦ತ
ವರ್ಷ: ೧೯೭೭
ಕೃತಿ: ಮೂಕಜ್ಜಿಯ ಕನಸುಗಳು

೪. ಮಾಸ್ತಿ ವೆಂಕಟೇಶ ಅಯ್ಯಂಗಾರ್
ವರ್ಷ: ೧೯೮೩
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಚಿಕವೀರರಾಜೆ೦ದ್ರ

೫. ವಿನಾಯಕ ಕೃಷ್ಣ ಗೋಕಾಕ್
ವರ್ಷ: ೧೯೯೦
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಭಾರತ ಸಿ೦ಧುರಶ್ಮಿ

೬. ಡಾ|| ಯು. ಆರ್. ಅನಂತಮೂರ್ತಿ
ವರ್ಷ: ೧೯೯೪
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ವಿಶೇಷ ಉಲ್ಲೇಖ ಸಂಸ್ಕಾರ

೭. ಡಾ|| ಗಿರೀಶ್ ಕಾರ್ನಾಡ್
ವರ್ಷ: ೧೯೯೮
ಕೃತಿ: ಕನ್ನಡ ಸಾಹಿತ್ಯಕ್ಕೆ ಸಮಗ್ರ ಕೊಡುಗೆ. ನಾಟಕಗಳು.

” ಇಂದ ಪಡೆಯಲ್ಪಟ್ಟಿದೆ
ನಮ್ಮ ನಾಡಿನ ವಿಶೇಷ ಗುಣಗಳಾದ ಅತಿಥಿ ಸತ್ಕಾರ, ಎಲ್ಲರನ್ನು ನಮ್ಮ ಮನೆಯವರೇ ಎನ್ನುವ ದೊಡ್ಡ ಮನಸ್ಸು ಇವೆಲ್ಲವೂ ಕನ್ನಡಿಗರಿಗೆ ರಕ್ತದಲ್ಲಿ ಬಂದಿರುವ ಗುಣಗಳು

GANDA BERUNDA -KANNADA FILM

Posted December 11, 2010 by anaamikamathu
Categories: Uncategorized

Movie : Ganda Berunda Year : 1984 Banner : Anjanadri Pictures Music : Satyam
Direction : S.V.Rajendrasingh Babu Producer : Vajramuni
Gandhaberunda – Probably the best. With all the exposure to holloywood movies on this subject we should not expect hi-fi stuff in Kannada, but in its times this was a very well made movie and very engrossing. Star cast: Ambarish, Shankar Nag, Srinath, Lakshmi, Vajramuni, Sundarakrishna Urs, Balakrishna, Umesh, Dinesh and Amrish Puri, who has acted in Ganda Berunda in Omar Sharief’s role of the desi version of Mckenna’s Gold
It was probably one of the first Kannada movies shot underwater (not sure but I can’t think of many before that). Amarish Puri & Vajramuni were excellent in their villain role. After making of gandaberunda film was not released for so many years of its completion and it was a flop as said by rajendrasingh babu Gandaberunda” .The film was loosely based on the all-time English classic Mekanas Gold.
It is excellent music by sathyam Bare bare nannavale by S Bala Subramaniyam and S Janaki and Gaganake Surya chandrare Kavalu By S Bala Subramaniyam and P.B. Srinivas

film film film

Posted December 8, 2010 by anaamikamathu
Categories: Uncategorized

ನನಗೆ ಸಿನೆಮಾ ಎಂಬುದು ಮೊದಲಿಂದಲೂ ಒಂದು ತೀರದ ಆಕರ್ಷಣೆ. ಅದೊಂದು ಕತ್ತಲ ಕೋಣೆಯ ಜಾದೂಗಾರ. ನಾನೊಬ್ಬ ಮೂವಿ ಬಫ್. ಎಲ್ಲ ರೀತಿಯ ಸಿನೆಮಾಗಳನ್ನೂ ನಾನು ನೋಡುತ್ತೇನಾದರೂ, ಕೊಂಚ ಸೆನ್ಸಿಬಲ್ ಎನಿಸುವಂಥ ಸೀರಿಯಸ್ ಸಿನೆಮಾಗಳೇ ಇಷ್ಟವಾಗುವುದು. ಹಾಗಂತ ಗಿರೀಶ್ ಕಾಸರವಳ್ಳಿ ಮಾತ್ರ ಅಲ್ಲ ಸ್ವಾಮಿ. ಇನ್ನು ಹೇಗೆ ಕಲೆಗೆ ಭಾಷೆಯ ಹಂಗಿಲ್ಲವೋ ಹಾಗೇ ಸಿನೆಮಾಗೆ ಕೂಡಾ ಇಲ್ಲ ಎನ್ನುವುದು ನನ್ನ ಥಿಯರಿ. ನಾನು ಥಿಯೇಟರ್ಗಳಲ್ಲಿ ಸಿನೆಮಾ ನೋಡುವುದಕ್ಕಿಂತಲೂ ಮನೆಯಲ್ಲಿ ಆರಾಮ ಕುರ್ಚಿಯಲ್ಲಿ ಕೂತು ನನ್ನ ಕಂಪ್ಯೂಟರಿನಲ್ಲಿ ನೋಡೋದೇ ಹೆಚ್ಚು. ಈಗ ಬರುವ ಡಿವಿಡಿಗಲಲ್ಲೆಲ್ಲಾ ಸಬ್ಟೈಟಲ್ ಇರುತ್ತಲ್ವಾ? ಇನ್ನು ಯಾಕೆ ಭಾಷೆಯ ಗೋಜು? ಕನ್ನಡ, ತೆಲುಗು ಸಿನಿಮಾಗಳಲ್ಲಿ ಒಳ್ಳೆಯ ಪ್ರವೇಶವಿದೆ. ಅದಲ್ಲದೆ ಹಿಂದಿ, ಇಂಗ್ಲೀಷು, ತಮಿಳು, ಮಲಯಾಳಮ್, ಬೆಂಗಾಲಿ, ಮರಾಠಿ, ಜಪಾನೀಸ್, ಇಟಾಲಿಯನ್, ಬ್ರೆಜಿಲಿಯನ್, ಇರಾನೀ ಸಿನೆಮಾಗಳನ್ನೂ ನೋಡುತ್ತೇನೆ.ಸಿನಿಮಾ  ಮನರಂಜನೆ
ನನ್ನ  ಸಿನಿಮಾ ನೋಡುವ  ಹವ್ಯಾಸ ಶುರು ಆಗಿರುಉದು ಕೊಲಾಜ್ ದಿನಗಳಲ್ಲಿ .ಮೊದಮೊದಲುಸಿನೆಮಾವನ್ನುನಾನು ಮನೋರಂಜನೆಯಾಗಿತೆಗೆದರು ನಂತರ ಸಿನಿಮಾದಲ್ಲೀರುವ ಹೊಸ ಅವಿಷ್ಕಾರಗಳುನನ್ನನ್ನುಅದರೆಡೆಗೆ ಸೆಳೆಯಿತು .ಹಳೆ ಕಾಲದ ಕನ್ನಡ ಸಿನೆಮಾಗಳಲ್ಲಿ ಗಿರೀಶ್  ಕಾಸರವಳ್ಳಿಯವರ  ನವ್ಯ  ಹಾಗು  ರಾಷ್ಟ್ರ  ಪ್ರಶಸ್ತಿ  ವಿಜೇತ  ಚಿತ್ರಗಳು  ನನಗೆ  ತುಂಬ  ಇಷ್ಟ 
ಹಾಗೆಯೆ  ಶಂಕರ್  ನಾಗ್   ನಿರ್ದೇಶನದ  ಮಿಂಚಿನ ಓಟ , ಆಕ್ಸಿಡೆಂಟ್  , ಒಂದು  ಮುತಿನ  ಕಥೆ  ಇತ್ಯಾದಿ  ಒಂದಾನೊಂದು  ಕಾಲದಲ್ಲಿ  , ಘಟಶ್ರಾದ್ದ , ಪುಟ್ಟಣ್ಣ  ಕಣಗಾಲ್   ಅವರ  ಶರಪಂಜರ  ನಗರ   ಹಾವು  ರಂಗ  ನಾಯಕಿ , ಮಾನಸ  ಸರೋವರ  ಇತ್ಯಾದಿ  ನನಗೆ  ತುಂಬ  ಇಸ್ತವಾದ  ಚಿತ್ರಗಳು

WHAT A WORLD

Posted December 8, 2010 by anaamikamathu
Categories: Uncategorized

World is full of colours of diffrent emotions it will reflects the feeling of our mental behavier

Hello world!

Posted December 8, 2010 by anaamikamathu
Categories: Uncategorized

All the way to my home town I regularly travel by bus. every time it is sleepy night journey last summer I prefered to go by day time train which go through western ghats and with breath-taking travel by ghats roads with bad road conditions.


Follow

Get every new post delivered to your Inbox.